ವಿದ್ಯಾ ದತ್ತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿದ್ಯಾ ದತ್ತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅಧ್ಯಕ್ಷರ ಸಂದೇಶ

ವಿದ್ಯಾ ದತ್ತ
ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಸದಸ್ಯರಿಗೆಲ್ಲಾ  ನಮಸ್ಕಾರಗಳು,

ತಮಗೆಲ್ಲರಿಗೂ ೬೧ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಂಘದ ಸದಸ್ಯರೆಲ್ಲಾ ಸೇರಿ, ನಮ್ಮ ಸಂಘದ ಈ ವರುಷದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮವನ್ನು ಭಾರೀ ಭೋಜನದಿಂದ ಶುರುಮಾಡಿ ಬಹಳ ವಿಜ್ಹ್ರಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ರತ್ನಮಾಲಾ ಪ್ರಕಾಶ್ ರವರ ಭಾವ ಸಂಗಮ ಕಾರ್ಯಕ್ರಮ ಎಲ್ಲರನ್ನೂ ಭಾವ ಸಮುದ್ರದೆಡೆ ಕರೆದುಕೊಂಡು ಹೋಯಿತು. ಕಾರ್ಯಕ್ರಮವು  ನಾಟಕೋತ್ಸವದಲ್ಲಿ ಅತ್ತ್ಯುತ್ತಮ ನಾಟಕ ಎಂಬ ಪ್ರಶಸ್ತಿಗೆ ಪಾತ್ರವಾದ, ಟ್ರೆಡ್ಮಿಲ್ ನಾಟಕದಿಂದ ಕೊನೆಗೊಂಡಿತು.

ಪ್ರಸಕ್ತ ಸಮಿತಿಯ ಕಾರ್ಯಚರಣೆ ಶುರುವಾಗಿ ಎರಡು ವರ್ಷದ ಮೇಲಾಗಿ, ರಾಜ್ಯೋತ್ಸವದ ಸಂದರ್ಭದಲ್ಲಿ ಸಾಂಕೇತಿಕವಾಗಿ ಮುಗಿದಿದೆ. ಮುಂಬರುವ ಕಾರ್ಯಕಾರಿ ಸಮಿತಿಗೆ ಈ ಜವಾದ್ದಾರಿಯುತ ಅಧಿಕಾರವನ್ನು ಸಂಪೂರ್ಣವಾಗಿ   ವಹಿಸುವ ಕೆಲಸ ಮಾತ್ರ ಬಾಕಿ ಇದೆ . ಈ ಕಾಲಾವಧಿಯಲ್ಲಿ ಪ್ರಸಕ್ತ ಸಮಿತಿಯು ಬಹಳಷ್ಟು ಪ್ರಗತಿಪರ ಬದಲಾವಣೆ ತಂದಿರುವುದು ನಿಮಗೆ ಈಗಾಗಲೇ ತಿಳಿದಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಊಟ, ಆಟ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಸಮಿತಿಯ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ, ಸಂಘದ ಹಿರಿಯ ಸದಸ್ಯರು ಹಾಗೂ ಕಿರಿಯ ಸದಸ್ಯರೆಲ್ಲರಿಗೂ ಕಾರ್ಯಕ್ರಮಗಳಲ್ಲಿ ಅವಕಾಶ, ಸಂಘದ ಸದಸ್ಯರಿಗೆ ಸ್ವಯಂ ಸೇವೆಗೆ ಉತ್ತೇಜನೆ ಇವೇ ಮುಂತಾದವು. ಇದರ ಪರಿಣಾಮ, ಎಲ್ಲರೂ ಸಂಘದ ಕಾರ್ಯಚಟುವಟಿಕೆಗೆ ಪಾಲ್ಗೊಳ್ಳಲು ಮುಂದಾಗಿ ಬರುತ್ತಲಿರುವುದು, ಆ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುತ್ತಿರುವುದು ಹೆಗ್ಗಳಿಕೆಯ ವಿಷಯ.

ಈ ಬದಲಾವಣೆಗಳನ್ನು  ತರುವಲ್ಲಿ, ನನ್ನೊಡನೆ ಕೈಜೋಡಿಸಿದವರು ಉಪಾಧ್ಯಕ್ಷರ ಸ್ಥಾನದಲ್ಲಿ ಅಮೃತ್ ದತ್ತಾತ್ರೆಯ, ಕಾರ್ಯದರ್ಶಿಗಳ ಸ್ಥಾನದಲ್ಲಿ ರವಿ ವಿಶ್ವನಾಥ್, ಖಾಜಾಮ್ಚಿಯಾಗಿ ಸವಿತಾ ಪ್ರದೀಪ್, ಊಟದ  ಉಸ್ತುವಾರರಾದ ಶಿರೀಶ್ ಕಾವೂರ್, ಆಟದ ಉಸ್ತುವಾರರಾದ ಪ್ರತಾಪ್ ಬಿ. ಆರ್, ಕಂಪು e-ಪತ್ರಿಕೆಯ ಸಂಪಾದಕಿ ಪೂರ್ಣಿಮಾ ಸುಬ್ರಮಣ್ಯ, ಕಂಪು  ಬ್ಲಾಗ್ ಉಸ್ತುವಾರರಾದ ಶಶಿಕಿರಣ್ ಹಾಗೂ ಪಬ್ಲಿಸಿಟಿ ಉಸ್ತುವಾರರಾದ ಅನು ಬೆನಕಟ್ಟಿ, ಅಂತರ್ಜಾಲ ಉಸ್ತುವಾರರಾದ ವಂದನಾ ಶರ್ಮ. ಇವರೆಲ್ಲರಿಗೂ ಹಾಗೂ  ಇವರ ಕುಟುಂಬದವರಿಗೂ  ಧನ್ಯವಾದಗಳು. ಅಲ್ಲದೆ ಈ ಎಲ್ಲಾ ಪ್ರಯತ್ನಕ್ಕಾಗಿ, ನನಗೆ  ಸಂಪೂರ್ಣ ಸಹಕಾರ ನೀಡಿದ ನನ್ನ ಕುಟುಂಬದವರಿಗೆಲ್ಲರಿಗೂ  ಹೃದಯಪೂರ್ವಕ ಧನ್ಯವಾದಗಳು.

ನಿಮ್ಮೆಲ್ಲರ  ಪ್ರೀತಿ, ಸಹೃದಯದ ಸಹಕಾರದಿಂದ ನಮ್ಮ ಸಮಿತಿಯ ಕಾರ್ಯಾಚರಣೆ ಸುಗಮವಾಗಿ ಸಾಗಿ ಬಂತು. ಇದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು. ಬನ್ನಿ, ಶ್ರೀವತ್ಸ ರಾಮನಾಥನ್ ನೇತೃತ್ವದ ಮುಂಬರುವ ಕಾರ್ಯಕಾರಿ ಸಮಿತಿಯನ್ನು ಸ್ವಾಗತಿಸೋಣ, ಹಾಗೂ  ಅವರ ಸಮಿತಿಗೂ ಇದೇ ರೀತಿ  ಸಹಕಾರ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ನಾವೆಲ್ಲರೂ ಒಟ್ಟಿಗೂಡಿ ಕರುನಾಡ ದೀಪ, ಸಿರಿ ನುಡಿಯ ದೀಪವನ್ನು, ಓಲವೇತ್ತಿ ತೋರುವ ದೀಪವನ್ನು ಹಚ್ಹೋಣ ಬನ್ನಿ.
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಜೈ ಭುವನೇಶ್ವರಿ, ಜೈ ಕರ್ನಾಟಕ , ಜೈ MKANT

ಇಂತಿ ನಿಮ್ಮೆಲ್ಲರ,
ವಿದ್ಯಾ ದತ್ತ


ಅಧ್ಯಕ್ಷರ ಸಂದೇಶ - ಯುಗಾದಿ ೨೦೧೬

ವಿದ್ಯಾ ದತ್ತ
ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಸದಸ್ಯರಿಗೆಲ್ಲಾ  ನಮಸ್ಕಾರ, 

ನಮ್ಮ ಸಂಘದ ಈ ವರುಷದ ಯುಗಾದಿ ಸಂದರ್ಭದಲ್ಲಿ  ಹಾಸ್ಯ ನಾಟಕೋತ್ಸವ ಹಾಗೂ ಇತರೆ ಮನೋರಂಜನಾ ಕಾರ್ಯಕ್ರಮಗಳು ನಡೆದು, ತನ್ಮಯೀ ಕೃಷ್ಣ ಮೂರ್ತಿಯವರ ಸುಗಮ ಸಂಗೀತದೊಂದಿಗೆ ಕೊನೆಗೊಂಡಿತು. ಯುಗಾದಿ ಹಬ್ಬ, ಬೇಸಿಗೆ ರಜೆ ಮುಗಿದು ಶಾಲಾ ಕಾಲೇಜು ಶುರುವಾಗುವ ಸಮಯ ಬಂದೇ ಹೋಯಿತು. ಕಾಲಚಕ್ರ ಉರುಳುತಿದ್ದಂತೆ ನಮ್ಮ ಪ್ರಸ್ತುತ ಕಾರ್ಯಕಾರಿ ಸಮಿತಿ ಕಾರ್ಯಾಚರಣೆ ಆರಂಭಿಸಿ ಎರಡು ವರ್ಷ ಸಂದಿದೆ. 

ಈ ವರ್ಷದ ಆರಂಭದಲ್ಲಿ ಸಂಘದ ಸದಸ್ಯತ್ವದ ನಮೂನೆಗಳ ಟೂಲ್ ಕಿಟ್,  "ಮಲ್ಲಿಗೆ ಮೆಂಬರ್ಸ್ ಡಾಷ್ ಬೋರ್ಡ್" ಜಾರಿಗೆ ತರಲಾಯಿತು. ಇದರಿಂದ ಸಂಘದ ಸದಸ್ಯತ್ವಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ ರಿಜಿಸ್ಟ್ರೇಷನ್ಗೆ ಬಹಳಷ್ಟು ಅನುಕೂಲಕರವಾಗಿದೆ. ಇದಲ್ಲದೆ ಸದಸ್ಯರ ಹಾಗೂ ಕಂಪು ತಂಡದ ಅನುಕೂಲವನ್ನು ಪರಿಗಣಿಸಿ ಮತ್ತು ಕಂಪು ಈ-ಪತ್ರಿಕೆಯ ಸೋಷಿಯಲ್ ಮೀಡಿಯಾ ಉಪಸ್ಥಿತಿಯನ್ನು ವಿಸ್ತಾರಗೊಳಿಸಲು "ಮಲ್ಲಿಗೆಕಂಪು" ಕಮ್ಯೂನಿಟಿ ಬ್ಲಾಗ್ ಚಲಾವಣೆಗೆ ತರಲಾಗಿದೆ. ಹೀಗೆ, ಮುಂಬರುವ ಸಮಿತಿಗಳಿಗೆ ಕಾರ್ಯನಿರ್ವಹಿಸಲು ಸುಲಭವಾಗುವಂತೆ, ಪ್ರಸ್ತುತ ಸಮಿತಿಯು ಈ ಎರಡು ವರ್ಷದ ಕಾಲಾವಧಿಯಲ್ಲಿ ಬಹಳಷ್ಟು ಪ್ರಗತಿಪರ ಬದಲಾವಣೆಗಳನ್ನು ತರುವಲ್ಲಿ ಸಫಲವಾಗಿದ್ದು ಮುಂದಿನ ಅಭಿವೃದ್ಧಿ ಹಾಗೂ  ಬೆಳವಣಿಗೆಗೆ ಒಂದು ಭದ್ರವಾದ ತಳಹದಿ ಹಾಕಿದೆ ಎಂದು ಹೇಳಲು ಹೆಮ್ಮೆ ಪಡುತ್ತೆನೆ. 

ಮಲ್ಲಿಗೆ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯಲ್ಲಿರುವ ನಾವೆಲ್ಲರೂ ಸ್ವಯಂಸೇವಕರೇ. ಈ ಸಂದರ್ಭದಲ್ಲಿ ನಾನು ನಮ್ಮ ಸದಸ್ಯರಲ್ಲಿ ಕೇಳುವುದೇನೆಂದರೆ, ಇದು ನಿಮ್ಮ ಸಂಘ, ಇದನ್ನು ಇನ್ನಷ್ಟು ಪ್ರಗತಿಪರ ಹಾದಿಯಲ್ಲಿ ನಡೇಸಿಕೊಂಡು ಹೋಗುವುದು ನಿಮ್ಮ ಕರ್ತವ್ಯವೂ ಹೌದು. ಎಲ್ಲರೂ ಕೈಜೋಡಿಸಿ ನಾವೆಲ್ಲರೂ ನಮ್ಮವರಿಗಾಗಿ ನಮ್ಮ ಕನ್ನಡ ಸಂಘಕ್ಕಾಗಿ ಎಂಬ ಸಮಚಿತ್ತದಿಂದ, ಹುರುಪಿನಿಂದ ಈ ಸಂಘವನ್ನು ಪ್ರಗತಿಪರ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಜೊತೆಗೂಡಿ ಮುಂದಾಗಿ ಬರುತ್ತಿರಬೇಕೆಂದು ಆಶಿಸುತ್ತೇನೆ. 

ಇಂತಿ ನಿಮ್ಮೆಲ್ಲರ,
ವಿದ್ಯಾ ದತ್ತ


ಅಧ್ಯಕ್ಷರ ಸಂದೇಶ - ರಾಜ್ಯೋತ್ಸವ ೨೦೧೫

ವಿದ್ಯಾ ದತ್ತ
ಆತ್ಮೀಯರೆ,

ಮಲ್ಲಿಗೆ ಕನ್ನಡ ಸಂಘದ ಸಮಸ್ತ ಬಂಧು ಮಿತ್ರರಿಗೆಲ್ಲ ನನ್ನ ನಮಸ್ಕಾರಗಳು. ಡಲ್ಲಾಸ್ಸ್ ನಗರಿಯ ಅನಿವಾಸಿ ಕನ್ನಡಿಗರು ತಮ್ಮ ತಾಯ್ನಾಡಿನ ಪ್ರೇಮವನ್ನು ವ್ಯಕ್ತಪಡಿಸಲು ಹಾಗೂ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ದೊರಕಿಸಿಕೊಡುವಲ್ಲಿ ನಮ್ಮ ಮಲ್ಲಿಗೆ ಕನ್ನಡ ಸಂಘವು ಎಡಬಿಡದೆ ಶ್ರಮ ವಹಿಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಅಂತೆಯೇ, ಈಗಷ್ಟೆ ನಾವೆಲ್ಲರೂ ಕರ್ನಾಟಕ ರಾಜ್ಯೊತ್ಸವ ಹಾಗೂ ದೀಪಾವಳಿಯನ್ನು ಆಚರಿಸಿ ಅದರ ಸವಿಯನ್ನು ಅನುಭವಿಸುತ್ತಿದ್ದೇವೆ.ಈ ವರ್ಷದ ಯುಗಾದಿಯ ಆಚರಣೆಯ ನಂತರ, MKANT SPORTS AND PICNIC ಹಾಗು ಧಾರವಾಡದ ಖಾನ್ ಸಹೋದರರ ಸಿತಾರ್ ಜುಗಲ್ಬಂದಿ ಕಾರ್ಯಕ್ರಮ ನಡೆಸಲಾಯಿತು. ತದನಂತರ, MKANT Rajyotsava Badminton Tournament ಕೂಡ ನಡೆಸಲಾಯಿತು.

ಡಲ್ಲಾಸ್ಸ್ ನಗರಿಯು ಸಾಂಸ್ಕ್ರುತಿಕ ಕಾರ್ಯಕ್ರಮಗಳ ಬೀಡಾಗಿದೆ ಎಂದು ಹೇಳ ಬಹುದು. ಹಾಗೆಯೇ, ನಮ್ಮ ಮಲ್ಲಿಗೆ ಕನ್ನಡ ಸಂಘದ ಮಹೋನ್ನತ ಕಾರ್ಯಕ್ರಮಗಳಾದ ಯುಗಾದಿ, ರಾಜ್ಯೋತ್ಸವ ಹಾಗೂ ದೀಪಾವಳಿ ಸಂದರ್ಭಗಳಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲು ಕೋರಿಕೆಗಳೂ ಹಾಗೂ ಅತಿಥಿ ಕಲಾವಿದರುಗಳ ಬೇಡಿಕೆಯೂ ಹೆಚ್ಚಾಗಿರುವುದು ಒಂದು ಸಂಕೇತ.
ಇವೆಲ್ಲಾ ಕೋರಿಕೆಗಳಿಗೆ ಅನುಗುಣವಾಗಿ ನಮಗಿರುವ ಕಾಲ ಮಿತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೆಕಾಗುವಂತಹ ಸವಾಲು ಹಾಗು ಇವೆಲ್ಲವನ್ನೊ ಸುಸೂತ್ರವಾಗಿ ನಡೆಸಿಕೊಂಡು ಹೋಗುವಲ್ಲಿ ಬೇಕಾಗುವ ಸ್ವಯಂಸೇವಕರ ಅವಶ್ಯಕತೆ ಮತ್ತು ಸಹಕಾರವನ್ನು ಸಂಘಟಿಸುವ ಸವಾಲುಗಳನ್ನು ಸಮಿತಿಯು ಎದಿರುಸುತ್ತದೆ ಎಂಬ ಅರಿವನ್ನು ನಾವೆಲ್ಲರೂ ಇಲ್ಲಿ ತಂದುಕೊಳ್ಳಬೇಕಾಗಿದೆ. ಇದಲ್ಲದೆ, ಇವೆಲ್ಲವನ್ನೂ ಆಯೋಜಿಸಲು, ಹಾಗೂ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಬೇಕಾಗುವ ತಾಂತ್ರಿಕ ಯೋಜನೆಗಳ ಅವಶ್ಯಕತೆಯನ್ನು ಅರಿತು, ಈ ನಿಟ್ಟಿನಲ್ಲಿ ಮಲ್ಲಿಗೆ ಕನ್ನಡ ಸಂಘದ ಕಾರ್ಯ ಕಾರಿ ಸಮಿತಿಯು ಅಭಿವೃದ್ದಿಯನ್ನು ತರುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.

ಈ ಯೋಜನೆಗಳನ್ನು ಅಳವಡಿಸಿಕೊಂಡು, ಕಾರ್ಯ ಕಾರಿ ಸಮಿತಿಗೆ ಸಹಕರಿಸುವುದು ಸಂಘದ ಸದಸ್ಯರ ಕರ್ತವ್ಯವಾಗಿದೆ. ಪ್ರತಿ ವರ್ಶವೂ ಬರುವ ಸಂಘದ ಕಾರ್ಯಕ್ರಮಗಳಿಗೆಲ್ಲ ಪ್ರತಿಯೊಬ್ಬ ಸದಸ್ಯರೂ ಸಹಕಾರವನ್ನೊದಗಿಸುವ ನಿಟ್ಟಿನಲ್ಲಿ ಸ್ವಯಂಸೇವೆ ಸಲ್ಲಿಸಲು ತಮ್ಮ ಸ್ನೇಹಿತರನ್ನೊಡಗೂಡಿ ಮುಂದಾಗಿ ಬರಬೇಕು. ಹೀಗೆ ನಾವೆಲ್ಲರೂ ಮುಂದುವರಿಯುವಲ್ಲಿ, ನಾವೆಲ್ಲರೂ ನಮ್ಮವರಿಗಾಗಿ ಎಂಬ ಭಾವನೆ ಅರ್ಥಪೂರ್ಣವಾಗುತ್ತದೆ ಅಲ್ಲವೇ? ಬನ್ನಿ, ಹೀಗೆ ಒಟ್ಟಿಗೆ ಕೈಜೋಡಿಸಿ ಮಾಡುವ ಕೆಲಸಗಳಿಂದ ಸಿಗುವ ಪರಮಾನಂದದ ಅನುಭವ ಸದಾ ನಮ್ಮೆಲ್ಲರ ಪಾಲಾಗಲಿ ಎಂದು ಹಾರೈಸೋಣ.

ಜೈ ಭುವನೇಶ್ವರಿ!
ಇಂತಿ ನಿಮ್ಮೆಲ್ಲರ,
ಶ್ರೀಮತಿ ವಿದ್ಯಾ ದತ್ತ

ಅಧ್ಯಕ್ಷರ ಸಂದೇಶ - ಯುಗಾದಿ ೨೦೧೫

ವಿದ್ಯಾ ದತ್ತಾ 
ಮಲ್ಲಿಗೆ ಕನ್ನಡ ಸಂಘದ ಬಂಧು ಮಿತ್ರರಿಗೆಲ್ಲಾ, 

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಮನ್ಮಥ ನಾಮ ಸಂವತ್ಸರ ನಮ್ಮೆಲ್ಲರಲ್ಲೂ ಪ್ರೀತಿ, ಬಾಂಧವ್ಯವನ್ನು ಹೆಚ್ಚಿಸಿ, ಸುಖ, ಶಾಂತಿ, ನೆಮ್ಮದಿ ತರಲೆಂದು ಹಾರೈಸುತ್ತೇನೆ. ಯುಗಾದಿ ಹಬ್ಬ ಎಂದೊಡೆ ಸಹಜವಾಗಿ, ಈ ಹಬ್ಬದ ಮಹತ್ವದ ಅಂಶವಾದ ಬೇವು - ಬೆಲ್ಲದ ಅರಿವನ್ನು ಮೂಡಿಸುತ್ತದೆ. ಬೇವು ಬೆಲ್ಲವು, ನಾವು ನಮ್ಮ ಜೀವನದಲ್ಲಿ ಕಾಣುವ ಸಿಹಿ-ಕಹಿ ಅನುಭವಗಳ ಸಂಕೆತ. ಬೇವು ಬೆಲ್ಲವನ್ನು ಒಟ್ಟಿಗೆ ಸೇವಿಸಿ, ನಾವು ನಮ್ಮ ಜೀವನದಲ್ಲಿ ವದಗುವ ಈ ಅನುಭವಗಳನ್ನು ಸಮನಾಗಿ ಸ್ವೀಕರಿಸಿ, ಅಭಿವ್ರುದ್ಧಿ ಹೊಂದುವ ಸಾಮರ್ಥ್ಯವನ್ನು ಆ ಭಗವಂತನು ನಮಗೆ ಕರುಣಿಸಲೆಂದು ಬೆಡುವ ಸುಸಂದರ್ಭವೇ ಯುಗಾದಿ ಹಬ್ಬವಾಗಿದೆ.

ಇದೇ ಆಶಯದಿಂದ ಮಲ್ಲಿಗೆ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯನ್ನು ಈ ಹಬ್ಬದ ಆಚರಣೆ ಇಂದಲೇ ಪ್ರಾರಂಭಿಸಲಾಗಿ, ಅದಕ್ಕೀಗ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಅದು ನಡೆಸಿದ ಚಟುವಟಿಕೆಗಳು ಇಂತಿವೆ. ಮೊದಲಿಗೆ MKANT SPORTS and PICNIC, ಎರಡನೆಯದಾಗಿ ಯಕ್ಷಗಾನ ಹಾಗು ಮುಖ್ಯ ಮಂತ್ರಿ ಚಂದ್ರುರವರ ರಸ ಸಂಜೆ, ಮೂರನೆಯದಾಗಿ ಮಲ್ಲಿಗೆ ಕನ್ನಡ ಸಂಘದ ೨೦ನೆ ವಾರ್ಷಿಕೊತ್ಸವ, ರಾಜ್ಯೊತ್ಸವ ಹಾಗು ದೀಪಾವಳಿ ಕಾರ್ಯಕ್ರಮ. ಇದಲ್ಲದೆ, ರಾಜ್ಯೊತ್ಸವ ಕ್ರೀಡಾ ಟೊರ್ನಮೆಂಟ್ MKANT TALENT SHOW ನಡೆಸಿದೆ. MKANT TALENT SHOW ಗೆ, MKANT GOT TALENT ಎಂಬ ಹೊಸ ನಾಮಧೆಯವನ್ನು ನೀಡಲಾಗಿ, ಈ ಕಾರ್ಯಕ್ರಮವನ್ನು, ನವ ಯುವಕರೇ ನಡೆಸಿಕೊಂಡು ಹೊಗುವ ನಿಟ್ಟಿನಲ್ಲಿ ಪ್ರಾರ್ಂಭಿಸಲಾಗಿದೆ.

ಪ್ರಸ್ತುತ ವರ್ಷದಲ್ಲಿ, ನಮ್ಮ ಕಾರ್ಯಕಾರಿ ಸಮಿತಿಯು "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು, ಹಳೆ ತತ್ವ ಹೊಸ ಯುಕ್ತಿ ಒಡಗೂಡೆ ಧರ್ಮ" ಎಂಬ ಉಕ್ತಿಗೆ ಅನುಗುಣವಾಗಿ, ಹಲವಾರು ರೀತಿಯ ಪ್ರಗತೀಪರ ಬದಲಾವಣೆಗಳನ್ನು ತರುವಲ್ಲಿ ಪ್ರಯತ್ನ ನಡೆಸಿದೆ. ಒಂದೊಂದಾಗಿ ಹೇಳಬೇಕೆಂದರೆ, ನಮ್ಮ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ನಮ್ಮ ಪ್ರಮುಖ ಕಾರ್ಯಕ್ರಮಗಳಾದ ಯುಗಾದಿ ಹಾಗು ಡೀಪಾವಳಿ ಕಾರ್ಯಕ್ರಮಗಳನ್ನು ದೊಡ್ಡ ಸಭಾಂಗಣದಲ್ಲಿ ನಡೆಸಲಾಗುತ್ತಿದ್ದು, ಭಾನುವಾರದ ಕಾರ್ಯಕ್ರಮಗಳಾದಾರೆ, ಊಟದಿಂದ ಪ್ರಾರಂಭ ಮಾಡುವ ಯೋಜನೆ, ಸಾಂಸ್ಕ್ರುತಿಕ ಕಾರ್ಯಕ್ರಮಗಳನ್ನು ನಡೆಸುವಲ್ಲಿಯೂ ಹಾಗು ಸಂಘದ ಸದಸ್ಯರಿಗೆಲ್ಲರಿಗೂ ಅನುಕೂಲಕರವಾಗಿ ಪರಿವರ್ತನೆಗೊಂಡಿದೆ. ಇವುಗಳಲ್ಲದೆ, ಇನ್ನೂ ಕೆಲವು ಪ್ರಗತೀಪರ ಯೊಜನೆಗಳಿಗಾಗಿ ಹಾಗೂ, ಸಂಘದ ಬಜೆಟ್ಗೆ ಅನುಕೂಲವಾಗುವಂತೆ ಮತ್ತು ಸದಸ್ಯರ ಅನುಕೂಲವನ್ನು ಪರಿಗಣಿಸಿ, ಈ ವರ್ಷದಿಂದ ಸಂಘದ ಸದಸ್ಯತ್ವದ ಹೊಸ ನಮೂನೆಗಳನ್ನು ಜಾರಿಗೆ ತರಲಾಗಿದೆ. ಮತ್ತೊಂದು ಮುಖ್ಯವದ ಬದಲಾವಣೆ ಅಂದರೆ, ಮಲ್ಲಿಗೆ ಕನ್ನಡ ಸಂಘದ social media ಉಪಸ್ತಿಥಿಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಘದ Facebook Page ಹಾಗು ನಮ್ಮ ಸಂಘದ ಕಾರ್ಯಚಟುವಟಿಕೆಗಳಿಗೆ, ಹಾಗು ಸದಸ್ಯರಿಗೆ ಅನುಕೂಲ ವಾಗುವಂತಹ mobile ready ಅನ್ತರ್ಜಾಲ ತಾಣ (Website) ಬಿಡುಗಡೆ ಮಾಡಲಾಯಿತು.

ನಮ್ಮ ಸಂಘವು ವಿಶಾಲವಾಗಿ ಬೆಳೆಯುತ್ತಿರುವುದು ಒಂದು ಸಂತಸದ ವಿಷಯ. ಆದಕ್ಕೆ ಪೂರಕವಾಗಿ, ನಮ್ಮ ಸಂಘದ ಸ್ವಯಂಸೇವಕರ ಅವಶ್ಯಕತೆಯು ಹೆಚ್ಹಾಗಿದೆ. ನಮ್ಮ ಮಲ್ಲಿಗೆ ಕನ್ನಡ ಸಂಘವು ನಮ್ಮಲ್ಲಿರುವ ಹಲವಾರು ಪ್ರತಿಭೆಗಳಿಗೆ ಒಂದು ಮಾದರಿಯ ವೇದಿಕೆಯಾಗಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಎಂಬ ಪುರಂಧರ ದಾಸರ ವ್ಯಾಖ್ಯಾನದಂತೆ, ನಮಗೆ ಹಲವಾರು ಅವಕಾಶಗಳನ್ನು ಮಾಡಿಕೊಟ್ಟಿರೊ ನಮ್ಮ ಈ ಮಲ್ಲಿಗೆ ಕನ್ನಡ ಸಂಘಕ್ಕೆ ಸ್ವಯಂ ಸೇವೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸೊಣ.ಈ ನಿಟ್ಟಿನಲ್ಲಿ, ನಾನ್ನು ನಮ್ಮ ಸಂಘದ ಹಿರಿಯ ಸದಸ್ಯರು ಹಾಗು ಕಿರಿಯ ಸದಸ್ಯರಲ್ಲಿ, ವಿನಂತಿಸುವುದೆನೆಂದರೆ, ಸಂಘದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೊಗುವುದರಲ್ಲಿ ನಿಮ್ಮ ಪಾತ್ರವೂ ಮಹತ್ತರವಾಗಿದೆ. ಫ್ರತಿಯೊಬ್ಬ ಸದಸ್ಯರೂ ಸಂಘದ ಸೇವೆ, ತಮ್ಮ ಮತ್ತೊಂದು ಕರ್ತವ್ಯವಾಗಿದೆ ಎಂಬ ಅರಿವಿನಿಂದ ಸ್ವಯಮ್ಪ್ರೆರಿತರಾಗಿ ಸ್ವಯಂಸೇವೆಗೆ ಸಿದ್ಧರಾಗಬೆಕು.

ಬನ್ನೀ, ನಾವೆಲ್ಲರೂ ಸೇರಿ, ಒಂದುಗೂಡಿ, ಕೈ ಜೋಡಿಸಿ, ಮುಂಬರುವ ನಮ್ಮೆಲ್ಲಾ ಕಾರ್ಯಕ್ರಮ ಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಹೊಗೊಣ.

ಇಂತಿ ವಂದನೆಗಳೊಂದಿಗೆ,
ಶ್ರೀಮತಿ ವಿದ್ಯಾ ದತ್ತಾ 

ಅಧ್ಯಕ್ಷರ ಸಂದೇಶ - ರಾಜ್ಯೋತ್ಸವ ೨೦೧೪

ಶ್ರೀಮತಿ ವಿದ್ಯಾ ದತ್ತ

ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಬಂಧು ಮಿತ್ರರಿಗೆಲ್ಲ ೨೦೧೪ ರ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ನಮ್ಮ ಮಲ್ಲಿಗೆ ಕನ್ನಡ ಸಂಘವು ಪ್ರಾರಂಭವಾಗಿ ಇಲ್ಲಿಗೆ ೨೦ ವರ್ಷಗಳು ಸಂದಿರುವುದರಿಂದ, ಈ ಬಾರಿಯ ಸಂಘದ ಉತ್ಸವದ ಆಚರಣೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ನಮ್ಮ ಕನ್ನಡ ಸಂಘವು ಕನ್ನಡದ ದೀಪವನ್ನು ಪ್ರಜ್ವಲವಾಗಿ ಬೆಳಗಿಸುವತ್ತ ಭರದಿಂದ ಸಾಗಿದೆ ಎಂಬುವುದರಲ್ಲಿ ಎರಡನೆ ಮಾತೇ ಇಲ್ಲ.

ಈ ಬೆಳವಣಿಗೆಯನ್ನು ಅರಿತು ಅದನ್ನು ಉಳಿಸಿಕೊಂಡು, ಬೆಳಸಿಕೊಂಡು ಪ್ರಗತಿ ಪಥದಲ್ಲಿ ಸಾಗುವ ಮಹದಾಸೆಯಿಂದ, ನಮ್ಮ ನೂತನ ಸಮಿತಿಯವರ ಕಾರ್ಯಾಚರಣೆ ಉತ್ಸಾಹದಿಂದ ಸಾಗಿದೆ. ಇದಕ್ಕೆ ಪೂರಕವಾಗಿ ಅದು ಈಗಾಗಲೆ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ. ಮೊದಲಿಗೆ, ವರ್ಷಾರಂಭದಲ್ಲಿ MKANT SPORTS ಮತ್ತು PICNIC ಕಾರ್ಯಕ್ರಮವನ್ನು ನಡೆಸಿತು. ತದ ನಂತರ ನಡೆಸಿದ ಯಕ್ಷಗಾನ ಕಾರ್ಯಕ್ರಮ ಹಾಗೂ ಮುಖ್ಯ ಮಂತ್ರಿ ಚಂದ್ರುರವರ ರಸ ಸಂಜೆ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಮುದಗೊಳಿಸಿ ಅತಿ ಸಂಭ್ರಮವನ್ನು ಉಂಟು ಮಾಡಿತು. ಇದಲ್ಲದೆ, ಸ್ಯಾನ್ಹೋಸೆಯಲ್ಲಿ ನಡೆದ ಈ ಬಾರಿಯ ಅಕ್ಕ ಸಮ್ಮೇಳನವನ್ನು , ನಮ್ಮ ಸಂಘದಿಂದ ಸುಮಾರು ೫೦ ಸದಸ್ಯರು ಪ್ರತಿನಿಧಿಸಿ, ಮೆರವಣಿಗೆ, ನಾಟಕ, ಹಾಡು ಮುಂತಾದ ವಿವಿಧ ವಿಭಾಗಗಳಲ್ಲಿ ಸಂಭ್ರಮದಿಂದ ಭಾಗ ವಹಿಸಿ ನಮ್ಮ ಮಲ್ಲಿಗೆ ಕನ್ನಡ ಸಂಘಕ್ಕೆ ಹೆಗ್ಗಳಿಕೆಯನ್ನು ಉಂಟುಮಾಡಿದ್ದಾರೆ. ಹಾಗೆಯೇ, ಈ ವರ್ಷದ MKANT ರಾಜ್ಯೋತ್ಸವ ಕ್ರೀಡಾ ಸ್ಪರ್ಧೆಗಳನ್ನು, ಅಕ್ಟೋಬರ್ ತಿಂಗಳಲ್ಲಿ, ಥ್ರೋಬಾಲ್, ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ವಿಭಾಗಗಳಲ್ಲಿ ನಡೆಸಲಾಯಿತು.

ಇವೆಲ್ಲಾ ಸಾಧ್ಯವಾಗುತ್ತಿರುವುದು ನಮ್ಮ ಸಂಘದ ಸದಸ್ಯರ ಸಂಪೂರ್ಣ ಸಹಕಾರ, ಆಸಕ್ತಿಯುತ ಪಾಲ್ಗೊಳ್ಳುವಿಕೆಯಿಂದ ಮತ್ತು ಸಮಿತಿಯ ಸದಸ್ಯರೆಲ್ಲರ ನಿಷ್ಠಾಪೂರ್ಣವಾದ ಕಾರ್ಯ ತತ್ಪರತೆಯಿಂದ ಮಾತ್ರ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ .

ನಮ್ಮ ಸಂಘದ ಲಾಂಛನ ಪ್ರತಿಪಪಾದಿಸುವಂತೆ, ನಾವೆಲ್ಲರೂ, ನಮ್ಮವರಿಗಾಗಿ ನಮ್ಮ ಕನ್ನಡ ಸಂಘಕ್ಕಾಗಿ ಎಂಬ ಅರಿವಿನಿಂದ, ಯಾವ ವಿಧವಾದ ಭೇದವಿಲ್ಲದೆ, ಸಮಚಿತ್ತದಿಂದಲೂ , ಪ್ರೀತಿ ವಾತ್ಸಲ್ಯದಿಂದಲೂ, ಒಬ್ಬರನೊಬ್ಬರು ಅರ್ಥೈಸಿಕೊಂಡು, ಸಹಕಾರದಿಂದ ಕೈ ಕೈ ಹಿಡಿದು ಕೊಂಡು, ಭಾವೈಕ್ಯತೆಯ ಪತಾಕೆಯನ್ನು ಹಾರಿಸುತ್ತಾ, ಉತ್ತರ ಟೆಕ್ಷಾಸ್ ನಲ್ಲಿ ಕನ್ನಡ ತನವನ್ನು ಎತ್ತಿ ಹಿಡಿಯುತ್ತಾ, ವಿಶಾಲವಾಗಿ ಬೆಳೆದಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಮಲ್ಲಿಗೆ ಕನ್ನಡ ಸಂಘದ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡೆ ಹಾಗು ಸಾಹಿತ್ಯಕ ಚಟುವಟಿಕಗಳಲ್ಲಿ ಭಾಗವಹಿಸುತ್ತಾ, ಸ್ವಯಂ ಸೇವೆ ಸಲ್ಲಿಸುತ್ತಾ ಮುನ್ನಡೆಯೋಣ ಬನ್ನಿ. ಕರ್ನಾಟಕ ಮಾತೆಯಾದ, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸುತ್ತೇನೆ .

ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಜೈ ಕರ್ನಾಟಕ, ಜೈ MKANT

ಇಂತಿ ವಂದನೆಗಳೊಂದಿಗೆ,
ಶ್ರೀಮತಿ ವಿದ್ಯಾ ದತ್ತ