ಅಧ್ಯಕ್ಷರ ಸಂದೇಶ - ಯುಗಾದಿ ೨೦೧೫

ವಿದ್ಯಾ ದತ್ತಾ 
ಮಲ್ಲಿಗೆ ಕನ್ನಡ ಸಂಘದ ಬಂಧು ಮಿತ್ರರಿಗೆಲ್ಲಾ, 

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಮನ್ಮಥ ನಾಮ ಸಂವತ್ಸರ ನಮ್ಮೆಲ್ಲರಲ್ಲೂ ಪ್ರೀತಿ, ಬಾಂಧವ್ಯವನ್ನು ಹೆಚ್ಚಿಸಿ, ಸುಖ, ಶಾಂತಿ, ನೆಮ್ಮದಿ ತರಲೆಂದು ಹಾರೈಸುತ್ತೇನೆ. ಯುಗಾದಿ ಹಬ್ಬ ಎಂದೊಡೆ ಸಹಜವಾಗಿ, ಈ ಹಬ್ಬದ ಮಹತ್ವದ ಅಂಶವಾದ ಬೇವು - ಬೆಲ್ಲದ ಅರಿವನ್ನು ಮೂಡಿಸುತ್ತದೆ. ಬೇವು ಬೆಲ್ಲವು, ನಾವು ನಮ್ಮ ಜೀವನದಲ್ಲಿ ಕಾಣುವ ಸಿಹಿ-ಕಹಿ ಅನುಭವಗಳ ಸಂಕೆತ. ಬೇವು ಬೆಲ್ಲವನ್ನು ಒಟ್ಟಿಗೆ ಸೇವಿಸಿ, ನಾವು ನಮ್ಮ ಜೀವನದಲ್ಲಿ ವದಗುವ ಈ ಅನುಭವಗಳನ್ನು ಸಮನಾಗಿ ಸ್ವೀಕರಿಸಿ, ಅಭಿವ್ರುದ್ಧಿ ಹೊಂದುವ ಸಾಮರ್ಥ್ಯವನ್ನು ಆ ಭಗವಂತನು ನಮಗೆ ಕರುಣಿಸಲೆಂದು ಬೆಡುವ ಸುಸಂದರ್ಭವೇ ಯುಗಾದಿ ಹಬ್ಬವಾಗಿದೆ.

ಇದೇ ಆಶಯದಿಂದ ಮಲ್ಲಿಗೆ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯನ್ನು ಈ ಹಬ್ಬದ ಆಚರಣೆ ಇಂದಲೇ ಪ್ರಾರಂಭಿಸಲಾಗಿ, ಅದಕ್ಕೀಗ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಅದು ನಡೆಸಿದ ಚಟುವಟಿಕೆಗಳು ಇಂತಿವೆ. ಮೊದಲಿಗೆ MKANT SPORTS and PICNIC, ಎರಡನೆಯದಾಗಿ ಯಕ್ಷಗಾನ ಹಾಗು ಮುಖ್ಯ ಮಂತ್ರಿ ಚಂದ್ರುರವರ ರಸ ಸಂಜೆ, ಮೂರನೆಯದಾಗಿ ಮಲ್ಲಿಗೆ ಕನ್ನಡ ಸಂಘದ ೨೦ನೆ ವಾರ್ಷಿಕೊತ್ಸವ, ರಾಜ್ಯೊತ್ಸವ ಹಾಗು ದೀಪಾವಳಿ ಕಾರ್ಯಕ್ರಮ. ಇದಲ್ಲದೆ, ರಾಜ್ಯೊತ್ಸವ ಕ್ರೀಡಾ ಟೊರ್ನಮೆಂಟ್ MKANT TALENT SHOW ನಡೆಸಿದೆ. MKANT TALENT SHOW ಗೆ, MKANT GOT TALENT ಎಂಬ ಹೊಸ ನಾಮಧೆಯವನ್ನು ನೀಡಲಾಗಿ, ಈ ಕಾರ್ಯಕ್ರಮವನ್ನು, ನವ ಯುವಕರೇ ನಡೆಸಿಕೊಂಡು ಹೊಗುವ ನಿಟ್ಟಿನಲ್ಲಿ ಪ್ರಾರ್ಂಭಿಸಲಾಗಿದೆ.

ಪ್ರಸ್ತುತ ವರ್ಷದಲ್ಲಿ, ನಮ್ಮ ಕಾರ್ಯಕಾರಿ ಸಮಿತಿಯು "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು, ಹಳೆ ತತ್ವ ಹೊಸ ಯುಕ್ತಿ ಒಡಗೂಡೆ ಧರ್ಮ" ಎಂಬ ಉಕ್ತಿಗೆ ಅನುಗುಣವಾಗಿ, ಹಲವಾರು ರೀತಿಯ ಪ್ರಗತೀಪರ ಬದಲಾವಣೆಗಳನ್ನು ತರುವಲ್ಲಿ ಪ್ರಯತ್ನ ನಡೆಸಿದೆ. ಒಂದೊಂದಾಗಿ ಹೇಳಬೇಕೆಂದರೆ, ನಮ್ಮ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ನಮ್ಮ ಪ್ರಮುಖ ಕಾರ್ಯಕ್ರಮಗಳಾದ ಯುಗಾದಿ ಹಾಗು ಡೀಪಾವಳಿ ಕಾರ್ಯಕ್ರಮಗಳನ್ನು ದೊಡ್ಡ ಸಭಾಂಗಣದಲ್ಲಿ ನಡೆಸಲಾಗುತ್ತಿದ್ದು, ಭಾನುವಾರದ ಕಾರ್ಯಕ್ರಮಗಳಾದಾರೆ, ಊಟದಿಂದ ಪ್ರಾರಂಭ ಮಾಡುವ ಯೋಜನೆ, ಸಾಂಸ್ಕ್ರುತಿಕ ಕಾರ್ಯಕ್ರಮಗಳನ್ನು ನಡೆಸುವಲ್ಲಿಯೂ ಹಾಗು ಸಂಘದ ಸದಸ್ಯರಿಗೆಲ್ಲರಿಗೂ ಅನುಕೂಲಕರವಾಗಿ ಪರಿವರ್ತನೆಗೊಂಡಿದೆ. ಇವುಗಳಲ್ಲದೆ, ಇನ್ನೂ ಕೆಲವು ಪ್ರಗತೀಪರ ಯೊಜನೆಗಳಿಗಾಗಿ ಹಾಗೂ, ಸಂಘದ ಬಜೆಟ್ಗೆ ಅನುಕೂಲವಾಗುವಂತೆ ಮತ್ತು ಸದಸ್ಯರ ಅನುಕೂಲವನ್ನು ಪರಿಗಣಿಸಿ, ಈ ವರ್ಷದಿಂದ ಸಂಘದ ಸದಸ್ಯತ್ವದ ಹೊಸ ನಮೂನೆಗಳನ್ನು ಜಾರಿಗೆ ತರಲಾಗಿದೆ. ಮತ್ತೊಂದು ಮುಖ್ಯವದ ಬದಲಾವಣೆ ಅಂದರೆ, ಮಲ್ಲಿಗೆ ಕನ್ನಡ ಸಂಘದ social media ಉಪಸ್ತಿಥಿಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಘದ Facebook Page ಹಾಗು ನಮ್ಮ ಸಂಘದ ಕಾರ್ಯಚಟುವಟಿಕೆಗಳಿಗೆ, ಹಾಗು ಸದಸ್ಯರಿಗೆ ಅನುಕೂಲ ವಾಗುವಂತಹ mobile ready ಅನ್ತರ್ಜಾಲ ತಾಣ (Website) ಬಿಡುಗಡೆ ಮಾಡಲಾಯಿತು.

ನಮ್ಮ ಸಂಘವು ವಿಶಾಲವಾಗಿ ಬೆಳೆಯುತ್ತಿರುವುದು ಒಂದು ಸಂತಸದ ವಿಷಯ. ಆದಕ್ಕೆ ಪೂರಕವಾಗಿ, ನಮ್ಮ ಸಂಘದ ಸ್ವಯಂಸೇವಕರ ಅವಶ್ಯಕತೆಯು ಹೆಚ್ಹಾಗಿದೆ. ನಮ್ಮ ಮಲ್ಲಿಗೆ ಕನ್ನಡ ಸಂಘವು ನಮ್ಮಲ್ಲಿರುವ ಹಲವಾರು ಪ್ರತಿಭೆಗಳಿಗೆ ಒಂದು ಮಾದರಿಯ ವೇದಿಕೆಯಾಗಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಎಂಬ ಪುರಂಧರ ದಾಸರ ವ್ಯಾಖ್ಯಾನದಂತೆ, ನಮಗೆ ಹಲವಾರು ಅವಕಾಶಗಳನ್ನು ಮಾಡಿಕೊಟ್ಟಿರೊ ನಮ್ಮ ಈ ಮಲ್ಲಿಗೆ ಕನ್ನಡ ಸಂಘಕ್ಕೆ ಸ್ವಯಂ ಸೇವೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸೊಣ.ಈ ನಿಟ್ಟಿನಲ್ಲಿ, ನಾನ್ನು ನಮ್ಮ ಸಂಘದ ಹಿರಿಯ ಸದಸ್ಯರು ಹಾಗು ಕಿರಿಯ ಸದಸ್ಯರಲ್ಲಿ, ವಿನಂತಿಸುವುದೆನೆಂದರೆ, ಸಂಘದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೊಗುವುದರಲ್ಲಿ ನಿಮ್ಮ ಪಾತ್ರವೂ ಮಹತ್ತರವಾಗಿದೆ. ಫ್ರತಿಯೊಬ್ಬ ಸದಸ್ಯರೂ ಸಂಘದ ಸೇವೆ, ತಮ್ಮ ಮತ್ತೊಂದು ಕರ್ತವ್ಯವಾಗಿದೆ ಎಂಬ ಅರಿವಿನಿಂದ ಸ್ವಯಮ್ಪ್ರೆರಿತರಾಗಿ ಸ್ವಯಂಸೇವೆಗೆ ಸಿದ್ಧರಾಗಬೆಕು.

ಬನ್ನೀ, ನಾವೆಲ್ಲರೂ ಸೇರಿ, ಒಂದುಗೂಡಿ, ಕೈ ಜೋಡಿಸಿ, ಮುಂಬರುವ ನಮ್ಮೆಲ್ಲಾ ಕಾರ್ಯಕ್ರಮ ಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಹೊಗೊಣ.

ಇಂತಿ ವಂದನೆಗಳೊಂದಿಗೆ,
ಶ್ರೀಮತಿ ವಿದ್ಯಾ ದತ್ತಾ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ