ವಿದ್ಯಾ ದತ್ತ
ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಸದಸ್ಯರಿಗೆಲ್ಲಾ ನಮಸ್ಕಾರ,
ನಮ್ಮ ಸಂಘದ ಈ ವರುಷದ ಯುಗಾದಿ ಸಂದರ್ಭದಲ್ಲಿ ಹಾಸ್ಯ ನಾಟಕೋತ್ಸವ ಹಾಗೂ ಇತರೆ ಮನೋರಂಜನಾ ಕಾರ್ಯಕ್ರಮಗಳು ನಡೆದು, ತನ್ಮಯೀ ಕೃಷ್ಣ ಮೂರ್ತಿಯವರ ಸುಗಮ ಸಂಗೀತದೊಂದಿಗೆ ಕೊನೆಗೊಂಡಿತು. ಯುಗಾದಿ ಹಬ್ಬ, ಬೇಸಿಗೆ ರಜೆ ಮುಗಿದು ಶಾಲಾ ಕಾಲೇಜು ಶುರುವಾಗುವ ಸಮಯ ಬಂದೇ ಹೋಯಿತು. ಕಾಲಚಕ್ರ ಉರುಳುತಿದ್ದಂತೆ ನಮ್ಮ ಪ್ರಸ್ತುತ ಕಾರ್ಯಕಾರಿ ಸಮಿತಿ ಕಾರ್ಯಾಚರಣೆ ಆರಂಭಿಸಿ ಎರಡು ವರ್ಷ ಸಂದಿದೆ.
ಈ ವರ್ಷದ ಆರಂಭದಲ್ಲಿ ಸಂಘದ ಸದಸ್ಯತ್ವದ ನಮೂನೆಗಳ ಟೂಲ್ ಕಿಟ್, "ಮಲ್ಲಿಗೆ ಮೆಂಬರ್ಸ್ ಡಾಷ್ ಬೋರ್ಡ್" ಜಾರಿಗೆ ತರಲಾಯಿತು. ಇದರಿಂದ ಸಂಘದ ಸದಸ್ಯತ್ವಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ ರಿಜಿಸ್ಟ್ರೇಷನ್ಗೆ ಬಹಳಷ್ಟು ಅನುಕೂಲಕರವಾಗಿದೆ. ಇದಲ್ಲದೆ ಸದಸ್ಯರ ಹಾಗೂ ಕಂಪು ತಂಡದ ಅನುಕೂಲವನ್ನು ಪರಿಗಣಿಸಿ ಮತ್ತು ಕಂಪು ಈ-ಪತ್ರಿಕೆಯ ಸೋಷಿಯಲ್ ಮೀಡಿಯಾ ಉಪಸ್ಥಿತಿಯನ್ನು ವಿಸ್ತಾರಗೊಳಿಸಲು "ಮಲ್ಲಿಗೆಕಂಪು" ಕಮ್ಯೂನಿಟಿ ಬ್ಲಾಗ್ ಚಲಾವಣೆಗೆ ತರಲಾಗಿದೆ. ಹೀಗೆ, ಮುಂಬರುವ ಸಮಿತಿಗಳಿಗೆ ಕಾರ್ಯನಿರ್ವಹಿಸಲು ಸುಲಭವಾಗುವಂತೆ, ಪ್ರಸ್ತುತ ಸಮಿತಿಯು ಈ ಎರಡು ವರ್ಷದ ಕಾಲಾವಧಿಯಲ್ಲಿ ಬಹಳಷ್ಟು ಪ್ರಗತಿಪರ ಬದಲಾವಣೆಗಳನ್ನು ತರುವಲ್ಲಿ ಸಫಲವಾಗಿದ್ದು ಮುಂದಿನ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಒಂದು ಭದ್ರವಾದ ತಳಹದಿ ಹಾಕಿದೆ ಎಂದು ಹೇಳಲು ಹೆಮ್ಮೆ ಪಡುತ್ತೆನೆ.
ಮಲ್ಲಿಗೆ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯಲ್ಲಿರುವ ನಾವೆಲ್ಲರೂ ಸ್ವಯಂಸೇವಕರೇ. ಈ ಸಂದರ್ಭದಲ್ಲಿ ನಾನು ನಮ್ಮ ಸದಸ್ಯರಲ್ಲಿ ಕೇಳುವುದೇನೆಂದರೆ, ಇದು ನಿಮ್ಮ ಸಂಘ, ಇದನ್ನು ಇನ್ನಷ್ಟು ಪ್ರಗತಿಪರ ಹಾದಿಯಲ್ಲಿ ನಡೇಸಿಕೊಂಡು ಹೋಗುವುದು ನಿಮ್ಮ ಕರ್ತವ್ಯವೂ ಹೌದು. ಎಲ್ಲರೂ ಕೈಜೋಡಿಸಿ ನಾವೆಲ್ಲರೂ ನಮ್ಮವರಿಗಾಗಿ ನಮ್ಮ ಕನ್ನಡ ಸಂಘಕ್ಕಾಗಿ ಎಂಬ ಸಮಚಿತ್ತದಿಂದ, ಹುರುಪಿನಿಂದ ಈ ಸಂಘವನ್ನು ಪ್ರಗತಿಪರ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಜೊತೆಗೂಡಿ ಮುಂದಾಗಿ ಬರುತ್ತಿರಬೇಕೆಂದು ಆಶಿಸುತ್ತೇನೆ.
ಇಂತಿ ನಿಮ್ಮೆಲ್ಲರ,
ವಿದ್ಯಾ ದತ್ತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ