ಅಧ್ಯಕ್ಷರ ಸಂದೇಶ - ರಾಜ್ಯೋತ್ಸವ ೨೦೧೫

ವಿದ್ಯಾ ದತ್ತ
ಆತ್ಮೀಯರೆ,

ಮಲ್ಲಿಗೆ ಕನ್ನಡ ಸಂಘದ ಸಮಸ್ತ ಬಂಧು ಮಿತ್ರರಿಗೆಲ್ಲ ನನ್ನ ನಮಸ್ಕಾರಗಳು. ಡಲ್ಲಾಸ್ಸ್ ನಗರಿಯ ಅನಿವಾಸಿ ಕನ್ನಡಿಗರು ತಮ್ಮ ತಾಯ್ನಾಡಿನ ಪ್ರೇಮವನ್ನು ವ್ಯಕ್ತಪಡಿಸಲು ಹಾಗೂ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ದೊರಕಿಸಿಕೊಡುವಲ್ಲಿ ನಮ್ಮ ಮಲ್ಲಿಗೆ ಕನ್ನಡ ಸಂಘವು ಎಡಬಿಡದೆ ಶ್ರಮ ವಹಿಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಅಂತೆಯೇ, ಈಗಷ್ಟೆ ನಾವೆಲ್ಲರೂ ಕರ್ನಾಟಕ ರಾಜ್ಯೊತ್ಸವ ಹಾಗೂ ದೀಪಾವಳಿಯನ್ನು ಆಚರಿಸಿ ಅದರ ಸವಿಯನ್ನು ಅನುಭವಿಸುತ್ತಿದ್ದೇವೆ.ಈ ವರ್ಷದ ಯುಗಾದಿಯ ಆಚರಣೆಯ ನಂತರ, MKANT SPORTS AND PICNIC ಹಾಗು ಧಾರವಾಡದ ಖಾನ್ ಸಹೋದರರ ಸಿತಾರ್ ಜುಗಲ್ಬಂದಿ ಕಾರ್ಯಕ್ರಮ ನಡೆಸಲಾಯಿತು. ತದನಂತರ, MKANT Rajyotsava Badminton Tournament ಕೂಡ ನಡೆಸಲಾಯಿತು.

ಡಲ್ಲಾಸ್ಸ್ ನಗರಿಯು ಸಾಂಸ್ಕ್ರುತಿಕ ಕಾರ್ಯಕ್ರಮಗಳ ಬೀಡಾಗಿದೆ ಎಂದು ಹೇಳ ಬಹುದು. ಹಾಗೆಯೇ, ನಮ್ಮ ಮಲ್ಲಿಗೆ ಕನ್ನಡ ಸಂಘದ ಮಹೋನ್ನತ ಕಾರ್ಯಕ್ರಮಗಳಾದ ಯುಗಾದಿ, ರಾಜ್ಯೋತ್ಸವ ಹಾಗೂ ದೀಪಾವಳಿ ಸಂದರ್ಭಗಳಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲು ಕೋರಿಕೆಗಳೂ ಹಾಗೂ ಅತಿಥಿ ಕಲಾವಿದರುಗಳ ಬೇಡಿಕೆಯೂ ಹೆಚ್ಚಾಗಿರುವುದು ಒಂದು ಸಂಕೇತ.
ಇವೆಲ್ಲಾ ಕೋರಿಕೆಗಳಿಗೆ ಅನುಗುಣವಾಗಿ ನಮಗಿರುವ ಕಾಲ ಮಿತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೆಕಾಗುವಂತಹ ಸವಾಲು ಹಾಗು ಇವೆಲ್ಲವನ್ನೊ ಸುಸೂತ್ರವಾಗಿ ನಡೆಸಿಕೊಂಡು ಹೋಗುವಲ್ಲಿ ಬೇಕಾಗುವ ಸ್ವಯಂಸೇವಕರ ಅವಶ್ಯಕತೆ ಮತ್ತು ಸಹಕಾರವನ್ನು ಸಂಘಟಿಸುವ ಸವಾಲುಗಳನ್ನು ಸಮಿತಿಯು ಎದಿರುಸುತ್ತದೆ ಎಂಬ ಅರಿವನ್ನು ನಾವೆಲ್ಲರೂ ಇಲ್ಲಿ ತಂದುಕೊಳ್ಳಬೇಕಾಗಿದೆ. ಇದಲ್ಲದೆ, ಇವೆಲ್ಲವನ್ನೂ ಆಯೋಜಿಸಲು, ಹಾಗೂ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಬೇಕಾಗುವ ತಾಂತ್ರಿಕ ಯೋಜನೆಗಳ ಅವಶ್ಯಕತೆಯನ್ನು ಅರಿತು, ಈ ನಿಟ್ಟಿನಲ್ಲಿ ಮಲ್ಲಿಗೆ ಕನ್ನಡ ಸಂಘದ ಕಾರ್ಯ ಕಾರಿ ಸಮಿತಿಯು ಅಭಿವೃದ್ದಿಯನ್ನು ತರುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.

ಈ ಯೋಜನೆಗಳನ್ನು ಅಳವಡಿಸಿಕೊಂಡು, ಕಾರ್ಯ ಕಾರಿ ಸಮಿತಿಗೆ ಸಹಕರಿಸುವುದು ಸಂಘದ ಸದಸ್ಯರ ಕರ್ತವ್ಯವಾಗಿದೆ. ಪ್ರತಿ ವರ್ಶವೂ ಬರುವ ಸಂಘದ ಕಾರ್ಯಕ್ರಮಗಳಿಗೆಲ್ಲ ಪ್ರತಿಯೊಬ್ಬ ಸದಸ್ಯರೂ ಸಹಕಾರವನ್ನೊದಗಿಸುವ ನಿಟ್ಟಿನಲ್ಲಿ ಸ್ವಯಂಸೇವೆ ಸಲ್ಲಿಸಲು ತಮ್ಮ ಸ್ನೇಹಿತರನ್ನೊಡಗೂಡಿ ಮುಂದಾಗಿ ಬರಬೇಕು. ಹೀಗೆ ನಾವೆಲ್ಲರೂ ಮುಂದುವರಿಯುವಲ್ಲಿ, ನಾವೆಲ್ಲರೂ ನಮ್ಮವರಿಗಾಗಿ ಎಂಬ ಭಾವನೆ ಅರ್ಥಪೂರ್ಣವಾಗುತ್ತದೆ ಅಲ್ಲವೇ? ಬನ್ನಿ, ಹೀಗೆ ಒಟ್ಟಿಗೆ ಕೈಜೋಡಿಸಿ ಮಾಡುವ ಕೆಲಸಗಳಿಂದ ಸಿಗುವ ಪರಮಾನಂದದ ಅನುಭವ ಸದಾ ನಮ್ಮೆಲ್ಲರ ಪಾಲಾಗಲಿ ಎಂದು ಹಾರೈಸೋಣ.

ಜೈ ಭುವನೇಶ್ವರಿ!
ಇಂತಿ ನಿಮ್ಮೆಲ್ಲರ,
ಶ್ರೀಮತಿ ವಿದ್ಯಾ ದತ್ತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ