ಪೂರ್ಣಿಮಾ ಸುಬ್ರಹ್ಮಣ್ಯ
ಅನಾದಿ ಕಾಲದಿಂದಲೂ
ಅವನಿ,
ಇಬ್ಬನಿಯ ಮಣಿಗಳನ್ನಾರಿಸುತ್ತಲೇ ಇದ್ದಾಳೆ,
ಇಬ್ಬನಿಯ ಮಣಿಗಳನ್ನಾರಿಸುತ್ತಲೇ ಇದ್ದಾಳೆ,
ಹಾರವಾಗಲೇ ಇಲ್ಲ !
ಅನಾದಿ ಕಾಲದಿಂದಲೂ
ರಜನಿ,
ಚುಕ್ಕೆಗಳನ್ನಿಡುತ್ತಲೇ ಇದ್ದಾಳೆ,
ಚಿತ್ರವಾಗಲೇ ಇಲ್ಲ !
ಸಣ್ಣ ಪುಟ್ಟ ನಿರೀಕ್ಷೆಗಳು
ಫಲಿಸದೆ , ಕೊರಗುವ
ನನ್ನ ಮರುಳಿಗೆ
ನಗೆ ಬಂತು !
ಮುಂಜಾನೆ ಅವನಿಗೆ
ಇಬ್ಬನಿಯನೆತ್ತಿಕೊಟ್ಟೆ!
ರಾತ್ರಿ ರಜನಿಗೆ
ಚುಕ್ಕೆಗಳನೆಣಿಸಿಕೊಟ್ಟೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ