ಪವಿತ್ರ ಭಟ್
ಬೇಕಾಗುವ ಸಾಮಗ್ರಿಗಳು :ಅಕ್ಕಿ (ಸೋನ ಮಸೂರಿ ) - 1 ಕಪ್ಪು
ಕೊತ್ತಂಬರಿ ಬೀಜ- 3 ಚಮಚ
ಜೀರಿಗೆ ಚಮಚ – 1 ಚಮಚ
ಒಣ ಮೆಣಸು - 3
ತುರಿದ ತೆಂಗಿನಕಾಯಿ – ¼ ಕಪ್ಪು
ಬೆಲ್ಲ – ¼ ಕಪ್ಪು
ಹುಣಸೆ ಹಣ್ಣು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಬದನೆ ಕಾಯಿ - 2-3
ಎಣ್ಣೆ - ಸ್ವಲ್ಪ
ತುಪ್ಪ - ಸ್ವಲ್ಪ
ಮಾಡುವ ವಿಧಾನ :
ಅಕ್ಕಿಯನ್ನು ಚೆನ್ನಾಗಿ ತೊಳೆದು ೪-೫ ಗಂಟೆ ನೀರಿನಲ್ಲಿ ನೆನೆಸಿಡಿ. ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಒಣ ಮೆಣಸನ್ನು ಹಾಕಿ ಹುರಿದುಕೊಳ್ಳಿ. ನೆನೆಸಿದ ಅಕ್ಕಿ, ಹುರಿದ ಕೊತ್ತಂಬರಿ ಬೀಜ, ಜೀರಿಗೆ, ಒಣ ಮೆಣಸು, ಹುಣಸೆ ಹಣ್ಣು, ತುರಿದ ತೆಂಗಿನಕಾಯಿ, ಬೆಲ್ಲ, ನೀರು ಹಾಕಿ ರುಬ್ಬಿಕೊಳ್ಳಿ. ನಂತರ ದೋಸೆ ಹಿಟ್ಟುನ್ನು ಒಂದು ಪಾತ್ರೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಹಿಟ್ಟನ್ನು ೩೦ ನಿಮಿಷ ಫರ್ಮೆಂಟ್ ಆಗಲು ಬಿಡಿ. ಬದನೇಕಾಯನ್ನು ತೆಳುವಾಗಿ (ಥಿನ್ ಸ್ಲೈಸ್) ಕತ್ತರಿಸಿಕೊಳ್ಳಿ. ಕಾದ ದೋಸೆ ಕಾವಲಿಯ ಮೇಲೆ ಬದನೆಕಾಯಿಯ ತುಂಡುಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಯ ಮೇಲೆ ದುಂಡಾಗಿ ಇಡುತ್ತಾ ಹೋಗಿ. ಎಣ್ಣೆ ಅಥವಾ ತುಪ್ಪ ಹಾಕಿ ದೋಸೆಯ ಎರಡೂ ಕಡೆಗಳನ್ನು ಬೇಯಿಸಿ ತೆಗೆಯಿರಿ. ಹೀಗೆ ಬಿಸಿ ಬಿಸಿಯಾದ ಉಪ್ಪು ಹುಳಿ ದೋಸೆ ಸವಿಯಲು ತಯಾರಾಗುವುದು. ಇದರಲ್ಲಿ ಉಪ್ಪು, ಹುಳಿ, ಖಾರ, ಸಿಹಿ ಮೊದಲೇ ಇರುವುದರಿಂದ ಯಾವುದೇ ಚಟ್ನಿಯ ಅಗತ್ಯವಿರುವುದಿಲ್ಲ.
ಸಲಹೆ : ಇದೇ ವಿಧಾನದಲ್ಲಿ ಬದನೆಯ ಬದಲಾಗಿ ಸಿಹಿ ಗೆಣಸಿನ ಸ್ಲೈಸ್ ಗಳನ್ನು ಸಹ ಉಪಯೋಗಿಸಿ ದೋಸೆಯನ್ನು ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ