ತಂಟೆ ತರಲೆ

ಸಿರಿ ಗೊಂಬಿ ( ಭಾಗ್ಯಶ್ರೀ ಕೊಟ್ಟೂರು)
ತರಲೆ ಪ್ರಶ್ನೋತ್ತರ :

1. ಮದುವೆಗೆ ಮೊದಲು ಮಗು, ವಿವಾಹಕ್ಕೆ ಮೊದಲು ವಿಚ್ಛೇದನ, ಕೆಲಸಕ್ಕೆ ಮೊದಲು ಊಟ ಸಿಗುವ ಸ್ಥಳ ಯಾವುದು?
ನಿಘಂಟು.

2. ಒಡೆದಾಗ ಹೆಚ್ಚು ಉಪಯೋಗಿ ಯಾವುದು?
ತೆಂಗಿನಕಾಯಿ, ಮೊಟ್ಟೆ.

3. ಒಂದು ಕೆಲಸ ಆಗಬೇಕಿದ್ದರೆ ಏನು ಮಾಡಬೇಕು?
ನಿಮ್ಮ ಮಕ್ಕಳಿಗೆ ಅದನ್ನು ಮಾಡಬೇಡಿ ಎಂದು ಹೇಳಬೇಕು.

4. ಲಂಚ ತೆಗೆದುಕೊಳ್ಳುವುದು ತಪ್ಪೇ?
ತೆಗೆದು ಕೊಳ್ಳುವುದು ತಪ್ಪಲ್ಲ, ಸಿಕ್ಕಿಬೀಳುವುದು ತಪ್ಪು.

5. ಬಿಡುವಿನ ವೇಳೆ ಬೇಕಿದ್ದರೆ ಏನು ಮಾಡಬೇಕು?
ಗಡಿಯಾರವನ್ನು ಕ್ಸೆರಾಕ್ಸ್ ಮಾಡಿ.

6. ಹಾಲು ಕೆಡದಿರಬೇಕಾದರೆ ಏನು ಮಾಡಬೇಕು?
ಅದನ್ನು ದನದ ಕೆಚ್ಚಲಲ್ಲೇ ಬಿಟ್ಟುಬಿಡಬೇಕು.

7. ನಾಸ್ತಿಕರಿಗೆ ಸ್ವರ್ಗದಲ್ಲೇನು ಕೆಲಸ?
ವಿರೋಧ ಪಕ್ಷದ ಸದಸ್ಯರಾಗಿ.

8. ಇಲಿಗೆ ಬಾಲ ಯಾಕೆ ಇದೆ?
ಸತ್ತ ನಂತರ ಹೆಣವನ್ನು ಎಳೆದು ತೆಗೆದುಕೊಂಡು ಹೋಗಲು.

9. ಸೊಳ್ಳೆ ಯಾಕೆ ಸಂಗೀತ ನುಡಿಸುತ್ತದೆ?
ಕುಡಿದ ರಕ್ತದ ಋಣವನ್ನು ಸಂಗೀತ ಸೇವೆಯ ಮೂಲಕ ತೀರಿಸಲು (ಪಾವೆಂ ಕೃಪೆ).

10. ವಿಚ್ಛೇದನಕ್ಕೆ ಪ್ರಮುಖ ಕಾರಣವೇನು?
ವಿವಾಹ.

ಮನೆ ಮದ್ದು :

1. ಮುಖದ ಕಲೆಗಳ ನಿವಾರಣೆಗಾಗಿ: ಕಡಲೆ ಹಿಟ್ಟು ಮತ್ತು ಅರಿಶಿನ ಪುಡಿಯ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನೀವು
ಮಾಡಬೇಕಾದದು ಇಷ್ಟೇ ಸ್ವಲ್ಪ ಕಡಲೆ ಹಿಟ್ಟು, ಅರಿಶಿನ ಪುಡಿ, ಲಿಂಬೆರಸದೊಂದಿಗೆ ಮಿಶ್ರಣಗೊಳಿಸಿ ಪ್ರತಿ ದಿನ ಮುಖದ ಮೇಲೆ
ಹಚ್ಚಿಕೊಳ್ಳಿ. ಕಲೆ ಹೇಳ ಹೆಸರಿಲ್ಲದಂತೆ ಮಾಯವಾಗುತದೆ.

2. ಸುಂದರ ಚರ್ಮಕ್ಕಾಗಿ ಗ್ರೀನ್ ಟೀ:ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ
ಕೊಬ್ಬು ದೂರವಾಗುತ್ತದೆ. ಶರೀರದ ವ್ಯರ್ಥಗಳು ದೂರವಾಗುತ್ತದೆ.ಅದರಿಂದ ಚರ್ಮಕ್ಕೂ ಸಹ ಲಾಭ ಆಗುತ್ತದೆ. ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಗ್ರೀನ್ ಟೀ ಹಚ್ಚಿರಿ.

3. ಚರ್ಮ ಒಡೆದರೆ: ಚಳಿಗೆ ಮುಖದ ಚರ್ಮ ಒಡೆದರೆ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಶೀಘ್ರವೇ ಗುಣವಾಗುವುದು.

4. ಆಮಶಂಕೆ: ಬೀಜ ಬಲಿಯದ ಸೀಬೆಕಾಯಿಗಳಿಂದ ಕಷಾಯ ಸಿದ್ಧಪಡಿಸಿ ಮಜ್ಜಿಗೆಯೊಂದಿಗೆ ಕುಡಿದರೆ ಆಮಶಂಕೆ ಮತ್ತು ಎದೆನೋವು ನಿವಾರಣೆಯಾಗುವುದು.

ಬೀchi ಅವರ ಬೆಳ್ಳಿ ತಿಂಮನ ಆಯ್ದ ನಗೆಹನಿಗಳು:

ಉಪಯೋಗ

(ಪ್ರಶ್ನೆಯೊಂದಕ್ಕೆ ತಿಂಮನ ಉತ್ತರ ಹೀಗಿತ್ತು-)

ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ-ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು ಹಿಡಿಯುತ್ತದೆ.

ಹೆಂಡತಿಗೆ ಕಾಯಿಲೆ

ತಿಂಮನ ಹೆಂಡತಿಯನ್ನು ಡಾಕ್ಟರು ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ.”
“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆಮಧ್ಯೆ ನಿಲ್ಲಿಸಿಬಿಡುತ್ತಾಳೆ.”
“ಏಕೆ?”
“ಉಸಿರಾಡಲಿಕ್ಕೆ.”

ತಿಳಿದರೆ ಗತಿ?

ತಿಂಮ ಊರಿಗೆ ಬಂದುದೇ ತಡ, ಮನೆಯಾಕೆ ಶುರುಮಾಡಿಬಿಟ್ಟಳು:

“ಪಕ್ಕದ ಮನೆಯ ಶಾರದಮ್ಮನಿಗೆ ಆಕೆಯ ಗಂಡ ಏನೇನು ಮಾಡಿಸಿದ್ದಾರೆ ನೋಡಿ…”
“ಏನು ಮಾಡಿಸಿದ್ದಾರಂತೆ?”
ತಿಂಮ ಕೇಳಿದ.
“ವಜ್ರದ ಓಲೆ ತಂದಿದ್ದಾರೆ. ರೇಡಿಯೋ,ಬಳೆ, ಇನ್ನೂ ಏನೇನೋ ಚಿನ್ನದ ಒಡವೇನೆಲ್ಲ ತಂದುಕೊಟ್ಟಿದ್ದಾರೆ.”
“ಹೂ, ಏನು ಈಗ?”
“ನೀವೇನು ತಂದುಕೊಟ್ಟಿರಿ?”
ಗಾಬರಿಯಿಂದ ಕೇಳಿದ ತಿಂಮ-
“ಯಾರು ನಾನೇ? ನಾಳೆ ತಿಳಿದರೆ ಸುಮ್ಮನಿರುತ್ತಾನೆಯೇ ಆ ಶಾರದಮ್ಮನ ಗಂಡ?
ಅಂತೂ ಸರಿಯಾಗಿದೆ

ತಿಂಮನ ತಾಯಿ ಮಹಾ ಗಠಾಣಿ.

ಒಂದು ದಿನ ಅಂಗಡಿಯ ಸೆಟ್ಟಿಯೊಡನೆ ಜಗಳಕ್ಕೇ ಬಂದಳು.
“ಏನಪ್ಪಾ ಸೆಟ್ಟಿ? ಒಂದು ವೀಸೆ ಹುಣಸೆಹಣ್ಣು ಕೊಡೆಂದು ತಿಂಮನನ್ನು ಕಳಿಸಿದರೆ ಎಷ್ಟು ಕೊಟ್ಟೆ ನೀನು?”
“ಏಕ್ರಮ್ಮಾ, ಒಂದು ವೀಸೆ ಸರಿಯಾಗಿ ಕಳಿಸಿದೆನಲ್ಲ.”
“ವೀಸೆ ಎಲ್ಲಿ ಬರಬೇಕು? ನಾನು ಮನೇಲಿ ತೂಕ ಮಾಡಿದೆ, ಮೂರು ಸೇರು ಮಾತ್ರವೇ ಇತ್ತಲ್ಲ.”
ಕಕ್ಕಾಬಿಕ್ಕಿಯಾದ ಸೆಟ್ಟಿ ಕೇಳಿದ-
“ಅಹುದಾ? ತಿಂಮನನ್ನು ತೂಕ ಮಾಡಿ ನೋಡಿದಿರೇನಮ್ಮಾ?”


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ