ಯುಗಾದಿ ಕವಿತೆ

ಪೂರ್ಣಿಮ ಸುಬ್ರಮಣ್ಯ
ಸರಿದು ನಿಂತಿರೆ
ಶಿಶಿರ ವೈಭವ
ಬೀಳ್ಕೊಡುಗೆ ಮನ್ಮಥನಿಗೂ!
ತಳಿರು ಮೆರೆದಿರೆ
ವಸಂತನುತ್ಸವ
ಸ್ವಾಗತ ದುರ್ಮುಖನಿಗೂ!!

ಒಣಗಿ ನಿಂತಿಹ
ಟೊಂಗೆಯೊಡಲಲಿ
ಯಾವ ಅಂತಃಶ್ರದ್ಧೆಯೋ ?!
ಚೈತ್ರಸ್ಪರ್ಶಕೆ
ಚಿಗುರ ಚಿಮ್ಮುವ
ಯಾವ ಅಮೃತ ಶಕ್ತಿಯೋ ?!

ಒಳಿತಿಗೆ ಸಂಭ್ರಮ
ಕೆಡುಕಿಗೆ ಸಂಯಮ
ಬೇವು ಬೆಲ್ಲದ ರೂಪಕ !
ಹೊಸತು ವರ್ಷವು
ತರಲಿ ಹರ್ಷವ
ಬದುಕು ಆಗಲಿ ಸಾರ್ಥಕ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ