ರಜಿನಿ ಎಸ್
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ .
ಎನ್ನುತ ನಮ್ಮ ಡಲ್ಲಾಸ್ ನಗರದ ಮಲ್ಲಿಗೆ ಕನ್ನಡ ಸಂಘವು ೨೦೧೬ ವರುಷದ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು.ಈ ಯುಗಾದಿ ಸಂಭ್ರಮವು ಗ್ರಾಂವಿಲ್ಲೆ ನಲ್ಲಿ ಏಪ್ರಿಲ್ ೩೦ನೆ ತಾರಿಕಂದು ನಡೆಯಿತು. ಸಡಗರದಿಂದ ಮಕ್ಕಳು,ದೊಡ್ಡವರು ಸಂತೋಷದಿಂದ ಯುಗಾದಿ ಹಬ್ಬವನ್ನು ಆಚರಿಸಿದರು . ನಮ್ಮ ಕರ್ನಾಟಕದಲ್ಲಿ ತಯಾರಾದ ವಿಶ್ವ ಪ್ರಸಿದ್ದ ಮೈಸೂರ್ಸಿಲ್ಕ್ ಸೀರೆಗಳಿಂದ ಅಲಂಕೃತ ವೇದಿಕೆಯು ಎಲ್ಲರಿಗೂ ಸ್ವಾಗತವನ್ನು ಕೋರಿತು.ಶ್ರೀಮತಿ ಜಯಂತಿ ಶಾಸ್ತ್ರೀ ಅವರ ನಿರೂಪಣೆಯಲ್ಲಿ ಶುರುವಾದ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು.ಇವರೊಂದಿಗೆ ಶಶಿಕಿರಣ್ ಅವರು ಪ್ರೇಕ್ಷಕರನ್ನ ರಂಜಿಸುವಲ್ಲಿ ಕೈಗೂಡಿಸಿದರು .
ಮೊದಲಿಗೆ ಪುಟ್ಟ ಪುಟ್ಟ ಮಕ್ಕಳ ವರ್ಣ ರಂಜಿತ ಕಾರ್ಯಕ್ರಮಗಳೊಂದಿಗೆ ಶುರುವಾದ ಸಂಜೆ, ಶ್ರೀಮತಿ ರೇವತಿ ಶ್ರೀನಾಥ್ ಅವರ 'ನಾನು ನನ್ನಲ್ಲ' ಎಂಬ ನಾಟಕದೊಂದಿಗೆ ರಂಗೇರಿತು . ನಮ್ಮ ಡಲ್ಲಾಸ್ ನಗರದವರೆ ಆದ ಶ್ರೀಮತಿ ರೇವತಿ ಶ್ರೀನಾಥ್ ಅವರು ಬರೆದಿರುವ ಪುಸ್ತಕದ ಬಿಡುಗಡೆಯು ಆಯಿತು .ಅದನತರ "ಸಂತೋಷಕೆ ಹಾಡು ಸಂತೋಷಕೆ" ಎಂದು ಹಾಡುತ ನಲಿಯುತ ನಮ್ಮ ಹುಡಿಗಿಯರ ತಂಡದ ನಂತರ "ಪಂಚತತ್ವ"ಎಂಬ ಬೆಳಕು ನೆರಳಿನ ಆಟ Rhythm Medley, "ಹಾಡು ಹಕ್ಕಿ ಹಾಡು"ಅಂಥಹ ಮನೋರಂಜಿತ ನೃತ್ಯ ಪ್ರದರ್ಶನ "ಪುಕ್ಕಟೆ ಸಲಹೆ","ಯುಗಾದಿ ಮನೋರಂಜನೆ" ಎಂಬ ನಾಟಕ ಎಲ್ಲರ ಮನೋರಂಜಿಸಿತು. ಮಹಿಳಾಮಣಿಗಳ ಫ್ಯಾಷನ್ ಶೋ ಎಲ್ಲರ ಮೆಚುಗ್ಗೆಯನ್ನು ಗಳಿಸಿತು. ಜಯಶ್ರೀ ಶಂಕರ್ ಮತ್ತು ಸುಮನಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಅವರ ಕೊಡುಗೆ ನಮ್ಮಸಮಾಜಕ್ಕೆ ಅಪಾರವಾದದ್ದು . ನಮ್ಮ ಕಲೆ ಹಾಗು ಸಂಸ್ಕೃತಿಯನ್ನು ಸಂಗೀತದ ಮೂಲಕ ಸದೃಢಗೊಳಿಸಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ತನ್ಮಯೀ ಕೃಷ್ಣ ಅವರಿಂದ ಇಂಪಾದ ಕರ್ನಾಟಕ ಶಾಸ್ತ್ರಿಯ ಸಂಗೀತ ಎಲ್ಲರ ಹೃದಯವನ್ನು ಗೆದ್ದಿತು. ಇವರೊಂದಿಗೆ ಹಿರಿಯ ಕಲಾವಿದರಾದ -ವಿದ್ವಾನ್ ಶ್ರೀಜಿ ಪೂವಳುರ್ ಆನ್ ಮೃದಂ C.N.ಚಂದ್ರಶೇಕ ವಯೊಲಿನ್ ಜೊತೆಯಿತ್ತು . ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ನಂತರ ಎಲ್ಲರಿಗೂ ರುಚಿ ರುಚಿ ಯಾದ ಭೋಜನವನ್ನು ಏರ್ಪಡಿಸಲಾಗಿತ್ತು. .ಒಟ್ಟಿನಲ್ಲಿ ಡಲ್ಲಾಸ್ ನಗರದ ಎಲ್ಲ ಕನ್ನಡಿಗರನ್ನು ಸೇರಿಸಿ ಯುಗಾದಿ ಹಬ್ಬವನ್ನು ಆಚರಿಸಿದ ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.
ಮಲ್ಲಿಗೆ ಕನ್ನಡ ಸಂಘವು ಎಲ್ಲ ಸ್ವಯಂ ಸೇವಕರಿಗೂ, ವೇದಿಕೆ ಹಾಗುಪ್ರವೇಶ ಮಂಟಪ ಅಲಂಕಾರಕ್ಕೆ ಸಹಾಯ ಮಾಡಿದ ಖುಶಿ ಹಿರೇಮಠ , ರಶ್ಮಿ ಹಿರೇಮಠ ಹಾಗು ಲತಾ ರವಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ