ಶಶಿಕಿರಣ್ ಬಿ ವಿ
ಸರ ಸರನೆ ಬಂದೆ, ಓರೆ ನೋಟದಿ ನಗೆಯ ಬೀರಿ
ಕಣ್ಣಲ್ಲೇ ಕಾವಲುಗಾರನಾದೆ, ಪ್ರತಿ ಕ್ಷಣವೂ ಅದೇ ನಗುವ ಕೋರಿ .
ಕಣ್ಣಿಗೆ ನಗುವ ಎರಚಿ , ಹೃದಯದಿ ನುಸಿಳಬೇಡ
ಒಮ್ಮೆ ಒಳಬಂದರೆ ನಾನಲ್ಲ ಕ್ಷಮಿಸಿ ಹೊರಬಿಡುವ ಉದಾರಿ .
ಅಷ್ಟಕ್ಕೂ ಗುಮ್ಮನೆ ಒಳ ಸಂಚುಯೇಕೆ , ಗುಟ್ಟೊಂದ ಹೇಳುವೆ ಕೇಳು!
ನಿನ್ನ ಹೊರತು ಇಲ್ಲ್ಯಾರಿಗೂ ಪ್ರವೇಶವಿಲ್ಲ , ನಿನಗಾಗಿಯೇ ಈ ರಹದಾರಿ
ಮನವೀಗ ಬೆಳದಿಂಗಳಿನ ಅಂಗಳವಾಗಿದೆ
ಪ್ರೀತಿಯ ಕೈತುತ್ತು ತಿನಿಸು ಬಾ ಗೆಳತಿ !
ನಿನ್ನ ಕನಸುಗಳ ಕಥೆ ಹೇಳುತ್ತಾ
ಭಾವನೆಗಳ ಬೆಸೆಯುತ್ತ ಇಬ್ಬರೇ ಕೂರೋಣ
ಹರೆಯದ ಆಸೆಗಳ ಹಂಗಿಲ್ಲದೆ ಹಾಸು ,
ಜೊತೆಯಾಗಿ ಸವಿಯೋಣ ಬೆಳಗಿನ ಆಯಾಸ ಕಳೆಯೋಣ .
ಹೊತ್ತು ಹೋಗುವವರೆಗೂ , ಕಣ್ಣಿಗೆ ನಿದ್ದೆ ಬರುವವರೆಗೂ ,
ಎಲ್ಲ ನಕ್ಷತ್ರಗಳ ಎಣಿಸುವವರೆಗು ನಿನ್ನೊಡನೆ ನಾನಿರುವೆ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ