ಬ್ರಾಕಲಿ ಮಂಚೂರಿಯನ್

-ಉಮಾ ಗಿರಿಧರ್


ಬೇಕಾಗುವ ಸಾಮಾನು  
ಬ್ರಾಕಲಿ - ೧/೨ ಕೆ.ಜಿ. (ಸಣ್ಣ ತುಂಡಾಗಿ ಹೆಚ್ಚಿರಬೇಕು)                                                            
ಈರುಳ್ಳಿ - ೧
ಹಸಿಮೆಣಸಿನಕಾಯಿ ೫ ರಿಂದ ೬
ಕೊತ್ತಂಬರಿ ಸೊಪ್ಪು - ಒಂದು ಸಣ್ಣ ಕಪ್ 
ಬೆಳ್ಳುಳ್ಳಿ - ೭-೮ ಎಸಳುಗಳು 
ಶುಂಠಿ - ಸಣ್ಣ ಚೂರು 
ಮೈದಾ - ೫ tbsp
ಕಾರ್ನ್ ಫ್ಲೋರ್ - ೧ tbsp
ಉಪ್ಪು - ರುಚಿಗೆ ತಕ್ಕಷ್ಟು 
ಫುಡ್ ಕಲರ್ (ಆರೆಂಜ್) - ೧ ಚಿಟಿಕೆ 
ಅಡಿಗೆ ಸೋಡಾ - ೧ ಚಿಟಿಕೆ 
ಸೋಯ ಸಾಸ್, ಚಿಲ್ಲಿ ಸಾಸ್, ವಿನೆಗರ್ ಹಾಗೂ ಟೊಮ್ಯಾಟೋ ಸಾಸ್ - ೨ tsp each
ಕರಿಯಲು ಎಣ್ಣೆ - ೨ ಕಪ್ 

ಮಾಡುವ ವಿಧಾನ 

ಮೊದಲಿಗೆ ಮೈದಾ ಹಾಗೂ ಕಾರ್ನ್ ಫ್ಲೋರ್ ಹಿಟ್ಟನ್ನು (ದೋಸೆ ಹಿಟ್ಟಿನ ಹದಕ್ಕೆ) ಉಪ್ಪು, ಸೋಡ , ಫುಡ್ ಕಲರ್ ಹಾಕಿ ಕಲಸಿಕೊಳ್ಳಬೇಕು. ಸಣ್ಣ ಸಣ್ಣ ತುಂಡಾಗಿರುವ ಬ್ರಾಕಲಿಯನ್ನು ಹಿಟ್ಟಿನಲ್ಲಿ ಅಡ್ಡಿ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆದಿಟ್ಟುಕೊಳ್ಳಿ . ನಂತರ ಒಂದು panನಲ್ಲಿ, ಒಂದು ಚಮಚ ಎಣ್ಣೆ ಹಾಕಿ, ಅದರಲ್ಲಿ ಸಣ್ಣಗೆ ಹೆಚ್ಚಿರುವ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹೊಂಬಣ್ಣ ಬರುವವರೆಗೆ ಹುರಿದು, ಕೊನೆಯಲ್ಲಿ ಸಾಸ್ ಮಿಶ್ರಣವನ್ನು ಸೇರಿಸಿ. ಜೊತೆಗೆ ಹೆಚ್ಚಿಟ್ಟಿರುವ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಕರಿದಿಟ್ಟುಕೊಂಡಿರುವ ಬ್ರಾಕಲಿ ತುಂಡುಗಳನ್ನು ಸೇರಿಸಿ ಎರಡು ನಿಮಿಷ ಕೈಯಾಡಿಸಿ ತೆಗೆದಿಡಬೇಕು.ಈ ಮಂಚೂರಿಯನ್ ಟೊಮೇಟೊ ಸಾಸ್ ಜೊತೆಯಲ್ಲಿ ತಿನ್ನಲು ಬಲು ರುಚಿ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ