ಹನಿಗವನಗಳು

 ಜ್ಯೋತಿ
ಯಾರಿಗೆ ಹೇಳಲಿ ನನ್ನ ಮನದ ದುಗುಡವ,
ತತ್ತರಿಸುತ್ತಿರುವೆ ಭಯದಿಂದ ನಡುಗಿ,
ಆಗಲೇ ಆಕಶಾದಲಿ ಮಿಂಚು ಗುಡುಗಿ,
ತಲೆ ತಟ್ಟಿ ಹೇಳಿತು ಬೆಳಗಾಯಿತೇ ಹುಡುಗಿ  

***********************************************                                    
ನಿನ್ನ ಕಂಡ ಆ ಮೊದಲ ಕ್ಷಣ,
ನಿನ್ನ ಕಂಡ ಆ ಕೊನೆಯ ಕ್ಷಣ,
ಇವೆರಡರ ಮದ್ಯದ ಆ ಸುಂದರ ಕ್ಷಣ,
ಕ್ಷಿಣಿಸುತ್ತಾ ಹೋಗುತ್ತಿದೆ ದಿನಾ ದಿನಾ
***********************************************                                  
ಕೆಂಪು ಕೆಂಪಗಿನ ಕೆಂಡ ಸಂಪಿಗೆ,
ಹಾಲು ಬಿಳುಪಿನ ಬಿಳಿ ಮಲ್ಲಿಗೆ,
ಬಣ್ಣ ಯಾವುದಾದರೇನಂತೆ ಕೊನೆಗೆ,
ಎಲ್ಲವೂ ಸಲ್ಲುವುದು ದೇವರ ಪೂಜೆಗೆ...
**********************************************                             
ಈ ಸುರ ಸುಂದರ ಮನ್ವಂತರ,
ನನ್ನ ಜೀವನದ ಮಧ್ಯಂತರ,
ಮನದಲಿ ಹೆಣೆದ ಕನಸುಗಳೇ ಸುಂದರ,
ನನಸಾದ ಕನಸುಗಳು ಹೇಳುತ್ತಿವೆ ನಿನ್ನ ಹೆಸರ
************************************************
                                  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ